Save 20% off! Join our newsletter and get 20% off right away!

ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಸಹಾಯಧನ

ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಾನುಸರಣ ಯೋಜನೆಯಡಿ, ಹೊಸ ಆಹಾರ ತಯಾರಿಕಾ, ಸಂಸ್ಕರಣಾ ಉದ್ಯಮ ಸ್ಥಾಪನೆಗೆ ಸಹಾಯಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಬ್ಯಾಂಕ್‌ ಮೂಲಕ ಸಾಲದ ರೂಪದಲ್ಲಿ (ಶೇ.90) ನಿಮ್ಮ ಯೋಜನೆಗೆ ಬೇಕಾಗುವ ಹಣಕಾಸಿನ ಸೌಲಭ್ಯ ಪಡೆದುಕೊಳ್ಳಲು, ಹಾಗೂ ಅಭ್ಯರ್ಥಿಯ ವಂತಿಗೆ (ಶೇ.10) ಅದರ ಜೊತೆಗೆ, ಶೇ.50 ಇದರಲ್ಲಿ ಕೇಂದ್ರ ಸರ್ಕಾರದ ಶೇ.35, ಹಾಗೂ ರಾಜ್ಯ ಸರ್ಕಾರದಿಂದ ಶೇ.15 ವರೆಗೆ, ತೋಟಗಾರಿಕೆ ಘಟಕಗಳಿಗೆ ಸರ್ಕಾರದ ಸಹಾಯಧನವನ್ನು ನೀಡಲು ಅವಕಾಶವಿರುತ್ತದೆ. ವೈಯಕ್ತಿಕ ಉದ್ಯಮಗಳು, ಸಹಕಾರಿ ಸಂಸ್ಥೆಗಳು, ಎಫ್‌ಪಿಒ, ಎಸ್‌ಹೆಚ್‌ಜಿ ಸಂಘಗಳು, ಪ್ರೈವೇಟ್ ಲಿ. ಕಂಪನಿಗಳು ಈ ಸಹಾಯಧನ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಅರಿಶಿನ ಪುಡಿ ತಯಾರಿಸುವ ಘಟಕ, ಮಸಾಲೆ ಪದಾರ್ಥಗಳ ಸಂಸ್ಕರಣಾ ಘಟಕ, ಚಿಪ್ಸ್ ತಯಾರಿಕಾ ಘಟಕ, ಅಣಬೆ ಮೌಲ್ಯವರ್ಧನೆ ಘಟಕ, ಗಿಡಮೂಲಿಕೆಗಳ, ಹರ್ಬಲ್ ಉತ್ಪನ್ನಗಳ ಮೌಲ್ಯವರ್ಧನೆ ಘಟಕ, ಜೇನು ಸಂಸ್ಕರಣಾ ಘಟಕ, ಕೋಲ್ಡ್ ಸ್ಟೋರೇಜ್ ಘಟಕ, ಉಪ್ಪಿನಕಾಯಿ ತಯಾರಿಸುವ ಘಟಕ, ಹಣ್ಣಿನ ಜ್ಯೂಸ್, ವಿವಿಧ ಸೊಪ್ಪಿನ ಪುಡಿಗಳ ತಯಾರಿಸುವ ಘಟಕ, ವ್ಯಾಕ್ಯೂಮ್ ಫ್ರೈಡ್ ಚಿಪ್ಸ್, ಸಾಸ್, ಕೆಚಪ್ ಹಾಗೂ ತೆಂಗಿನ ಉಪ ಉತ್ಪನ್ನಗಳ ತಯಾರಿಕಾ ಘಟಕಕ್ಕೆ ಸಹಾಯಧನ ನೀಡಲಾಗುತ್ತದೆ ಎಂದು, ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ ಕನ್ನೂರ ಅವರನ್ನು 9901553190 ಸಂಪರ್ಕಿಸಬಹುದಾಗಿದೆ.